ಜಿ. ಎಸ್. ಆಮೂರ

ಪುಸ್ತಕಗಳನ್ನು ಆನ್‌ಲೈನ್‌ನಲ್ಲಿ ಓದಿ

ಜಿ. ಎಸ್. ಆಮೂರ ಅವರ ಕೆಲವು ಕೃತಿಗಳನ್ನು ಇಲ್ಲಿ ಆನ್‌ಲೈನ್‌ನಲ್ಲಿ ಓದಬಹುದು:

ಆಮೂರರ ಬಗ್ಗೆ

ಡಾ. ಗುರುರಾಜ ಶ್ಯಾಮಾಚಾರ ಆಮೂರ (೦೮-೦೫-೧೯೨೫ – ೨೮-೦೯-೨೦೨೦) ಕನ್ನಡದ ಖ್ಯಾತ ವಿಮರ್ಶಕ ಮತ್ತು ಸಾಹಿತಿ. ಇವರ “ಭುವನದ ಭಾಗ್ಯ” ಎಂಬ ಕೃತಿಗೆ ೧೯೯೬ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
ಅಧ್ಯಾಪಕರಾಗಿದ್ದಾಗಲೇ ‘ಕಾಮಿಡಿಯ ಪರಿಕಲ್ಪನೆ’ ಎಂಬ ಮಹಾಪ್ರಬಂಧ ಬರೆದು ಪಿ.ಎಚ್.ಡಿ. ಪಡೆದರು. ಐದು ದಶಕಗಳಿಂದಲೂ ವಿಮರ್ಶಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಡಾ.ಅಮೂರ ಅವರು ಇಂಗ್ಲಿಷ್ ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದರು. ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ(ಗೌರವ) ಪದವಿ ಪಡೆದರು. ಕುಮಟಾ, ಗದಗ ಹಾಗೂ ಔರಂಗಾಬಾದ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ೧೬ ವರ್ಷ ಸೇವೆ ಸಲ್ಲಿಸಿದರು.
ಡಾ. ಅಮೂರರು ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ೨೦೨೦ರ ಸೆಪ್ಟೆಂಬರ್ ೨೮ರಂದು ವಯೋಸಹಜ ಖಾಯಿಲೆಯಿಂದ ನಿಧನರಾದರು.

ಈ ಸಂಭಾಷಣೆ ಡಾ. ಜಿ.ಎಸ್. ಅಮೂರ ಅವರ ಸಾಹಿತ್ಯಿಕ ಕೊಡುಗೆಗಳ ಬಗ್ಗೆ AI (ಕೃತಕ ಬುದ್ಧಿಮತ್ತೆ) ಬಳಸಿ ರಚಿಸಲಾದದ್ದು.